ರಜತ್ ಚೌಹಾಣ್ (ಜನನ ೩೦ ಡಿಸೆಂಬರ್ ೧೯೯೪) ಇವರು ಭಾರತೀಯ ಬಿಲ್ಲುಗಾರರು. ಕೋಪನ್ ಹ್ಯಾಗನ್ ನಲ್ಲಿ ನಡೆದ ವಿಶ್ವ ಬಿಲ್ಲುಗಾರಿಕೆ ಚಾಂಪಿಯನ್ ಶಿಪ್ ನಲ್ಲಿ ಚೌಹಾಣ್ ಬೆಳ್ಳಿ ಪದಕ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅವರು ಇಂಚಿಯಾನ್‌ನಲ್ಲಿ ನಡೆದ ಏಷ್ಯನ್ ಗೇಮ್ಸ್ ೨೦೧೪ ರಲ್ಲಿ ಪುರುಷರ ಸಂಯುಕ್ತ ಬಿಲ್ಲುಗಾರಿಕೆಯ ಗುಂಪು ಪಂದ್ಯಾವಳಿಯಲ್ಲಿ ಅಭಿಷೇಕ್ ವರ್ಮಾ ಮತ್ತು ಸಂದೀಪ್ ಕುಮಾರ್ ಅವರೊಂದಿಗೆ ಚಿನ್ನದ ಪದಕವನ್ನು ಗೆದ್ದರು. ೨೦೧೪ ರಲ್ಲಿ ಅವರು ಬಿಲ್ಲುಗಾರಿಕೆಯಲ್ಲಿ ವಿಶ್ವಕಪ್‌ನ ಅಂತಿಮ ಹಂತಕ್ಕೆ ಅರ್ಹತೆ ಪಡೆದ ಮೊದಲ ಭಾರತೀಯ ಸಂಯುಕ್ತ ಬಿಲ್ಲುಗಾರರಾದರು ಮತ್ತು ೨೦೧೫ ವಿಶ್ವ ಬಿಲ್ಲುಗಾರಿಕೆ ಚಾಂಪಿಯನ್‌ಶಿಪ್‌ನ ಅಂತಿಮ ಘಟ್ಟಕ್ಕೆ ತಲುಪಿದರು. == ಇತರ ಸಾಧನೆಗಳು == ೨೦೧೫ ರ ಏಷ್ಯನ್ ಬಿಲ್ಲುಗಾರಿಕೆ ಚಾಂಪಿಯನ್‌ಶಿಪ್‌ - ಪುರುಷರ ವಿಭಾಗದಲ್ಲಿ == ಪ್ರಶಸ್ತಿಗಳು == ಅರ್ಜುನ ಪ್ರಶಸ್ತಿ (೨೦೧೬) == ಉಲ್ಲೇಖಗಳು ==